MadhuLekha

Wednesday, June 16, 2021

Rise in Love !!

 The big moment in the life of this teen youngster had arrived.

Vicky's heart was pounding. He felt his heart will reach his mouth any moment. 
Nikitha was all over his mind & he couldn't think of anything else at this moment. He was about to spell out & express his heartfelt feelings to this girl who had become his dream girl.

 Well..well..well.. How did this all start? And who is this Nikitha ?
Lets do a deep dive into Vicky's past to find out.

Vicky is the elder son of Mr Rajkumar, a bank officer by profession. His mom seetha is a home maker. A typical indian middle class family, we must say. Vicky has a younger brother called Sunny. Vicky's dad was a man with an average salary of about 25k which is good income for a middle class family. 
But there was a problem. Mr Raj was undoubtedly a good family man but was a spend thrift & a financial risktaker by nature. As a result, Mr Raj was under the vicious circle of debt in the form of loans and credit cards. Mr Raj used to hallucinate that he is getting stuff for free whenever he used to shop with his credit card. As a result, a major chunk of his salary used to get spent in paying those hefty interest amounts being levied by credit card companies. When Vicky was born... Raj was on cloud 9 & he always thought that his elder son will help him in coming out of his financial mess. In this direction, Raj was keen to admit Vicky to a computer science engineering college. Vicky was an excellent science student right from his childhood & this further encouraged Mr Raj's belief about his son Vicky.

Vicky was a charming & good looking boy since childhood. Girls used to swoon over him to get to speak to him. A girl called Hema who was his friend's elder sister told him, 'dont go out in front of girls right after head bath else you will be mobbed by them'.

Vicky was the kind of boy who liked to be with friends always. He also had this fantasy to fall in love with a girl someday. And he was always on the lookout for a girl looking at whom he would feel butterflies in his stomach !

Saturday, October 12, 2013

ವಿಪರ್ಯಾಸ‌

ಇಳಿ ಸಂಜೆ ಭಾನುವಾರದ ಸಮಯ. ಮನೆಯ ಬಾಲ್ಕನಿ ಕಿಟಕಿಯ ಹತ್ತಿರ ಕುಳಿತ ಮೋಹನ ಕಾಫೀ ಹೀರುತ್ತಾ ಕುಳಿತಿದ್ದ.
'ರೀ.. ಕಾಫಿಗೆ ಸಕ್ಕರೆ ಸರಿ ಇದೆಯಾ ?' ಅಂತ ಅಡಿಗೆ ಮನೆ ಕಡೆ ಇಂದ ಧ್ವನಿ ಬಂತು ಹೆಂಡತಿಯದ್ದು. ನೆನಪಿನ ಉಗಿಬಂಡಿಗೆ ಯಾರೋ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದಂತೆ ಆಯಿತು ಮೋಹನನಿಗೆ. ತನ್ನ ಹಳೆ ಶಾಲೆ ಕಾಲೇಜು ಮಿತ್ರರನ್ನು ನೆನಪಿಸಿ ಕೊಳ್ಳುತಿದ್ದ. ಆ ದಿನಗಳು ಎಷ್ಟು ಚೆನ್ನಾಗಿದ್ದವು. ಗೆಳೆಯರ ಜೊತೆ ಕಳೆದ ಆ ದಿನಗಳು ಮತ್ತೆ ಹಿಂತಿರುಗಿ ಬರಲಾರವು.

ಗೆಳೆಯರಿಗೋಸ್ಕರ ಏನು ಬೇಕಾದರು ಮಾಡುವ ಹುಮ್ಮಸ್ಸು ಎಲ್ಲರಿಗೂ. ತಾನು ಇಂಜಿನಿಯರಿಂಗ್ ನಲ್ಲಿ ಎರಡನೆ ಸೆಮಿಸ್ಟರ್ ನಲ್ಲಿ ಫೇಲ್ ಆದಾಗ ಗೆಳೆಯ ರ ಸಹಾಯ ಇಲ್ಲದೆ ಇದ್ದಲಿ ತಾನು ಫೇಲ್ ಆದ ವಿಶಯಗಳ ನ್ನು ಪಾಸ್ ಮಾಡಲು ಆಗುತ್ತಿರಲಿಲ್ಲ.

' ಸಕ್ಕರೆ ಸರಿ ಇದೆ' ಅಂತ ಅಂದ ಮೋಹನ.

ಮರುದಿನ ಆಫೀಸಿನಿಂದ ವಾಪಸ್ಸು ಬಂದ ಮೋಹನನಿಗೆ ಅರ್ಜೆಂಟಾಗಿ ಮೊಬೈಲ್ ಫೋನ್ ಸರ್ವಿಸ್ ಅಂಗಡಿಗೆ ಹೋಗ ಬೇಕಾದ ಸಂದರ್ಭ ಬಂತು. ಯಾಕೋ ಅವನ ಫೋನು ಪದೆ ಪದೆ ಆಫ್ ಆಗಿಬಿಡುತಿತ್ತು.

ದಿನ ಬಸ್ ನಲ್ಲಿ ಆಫೀಸ್ ಗೆ ಓಡಾಡುವ ಮೋಹನನಿಗೆ ಅಂದು ತನ್ನ ಬೈಕಿನ ಅವಶ್ಯಕತೆ ಬಂತು. 'ಶ್ರುಂಗಾ... ಇದೇನೇ ಇದು.. ನನ್ನ ಬೈಕು ಕಾಣಿಸ್ತಾನೇ ಇಲ್ಲ !! ಯಾರು ತಗೂಂಡು ಹೋದ್ರು ?' ಅಂತ ಕೇಳಿದ ಮೋಹನ.

ಅದು ನಿಮ್ಮ ಗೆಳೆಯ ಅಮಿತ್ ಗಾಡಿ ಟೈರು ಪಂಚರ್ ಆಗಿ ಹೋಯಿತಂತೆ. ಅವರು ಅರ್ಜೆಂಟಾಗಿ ಅವರ ತಾಯಿಗೆ ಔಷಧಿ ತರಬೇಕಾಗಿತ್ತು. ಅದಕ್ಕೇ ನಿಮ್ಮ ಗಾಡಿ ಕೀ ಈಸ್ಕೂಂಡ್ರು.

'ಓ.. ಹೌದಾ.. ಆಯ್ತು ಬಿಡು' ಆಂತ ಅಂದವನು ಮನಸ್ಸಿನೂಳಗೆ ಮಂಡಿಗೆ ಹಾಕತೂಡಗಿದ. ಒಂದು ಕಡೆಯ ಒಳ ಮನಸ್ಸು 'ಹೋಗಲಿ ಬಿಡು.. ಅವನ ತಾಯಿಗೆ ಔಷಧಿ ತರಬೇಕಿತ್ತಂತೆ' ಅಂತ ಅನಿಸಿತು. ಆದರೆ ಆತನ ಮನಸ್ಸಿನ ಇನ್ನೊಂದು ಕಡೆ 'ಅಯ್ಯೋ ಇವನು ಇವತ್ತೇ ನನ್ನ ಗಾಡಿ ತಗೂಂಡು ಹೋಗಬೇಕಾ...' ಅಂತ ಮರುಗಿದ.

 ಒಂದು ಕ್ಷಣ ಮತ್ತೆ ಯೋಚನೆ ಮಾಡಿದಾಗ ಮೋಹನ ನಿಗೆ ಅನಿಸಿತು. 'ಇದೇನಿದು.. ಅಮಿತ್ ನನಗೆ ಹಿಂದೆ ಹಲವಾರು ವರ್ಷಗಗಳಿಂದ ಎಂಥಹ ಆಪ್ತ ಗೆಳೆಯ. ಕಾಲೇಜಿನಲ್ಲಿ ಅವನ ಸಹಾಯವಿಲೢದೆ ಇದ್ದಿದರೆ ನಾನು ಕೆಲವು ವಿಶಯಗಳಲ್ಲಿ ಪಾಸ್ ಮಾಡಲು ಆಗುತ್ತಲೇ ಇರಲಿಲ್ಲ.' ಅಂಥ ಆಪ್ತ ಮಿತ್ರ ಯಾವಾಗ ನನ್ನ ಜೀವನ ದಲ್ಲಿ ತನ್ನ ಪ್ರಾಮುಖ್ಯತೆ ಕಳೆದುಕೊಂಡ ಅಂತ ನೆನೆಸಿಕೊಂಡಾಗ ಅವನಿಗೆ ಅನಿಸಿತು. ಕಾಲಕ್ಕೆ ಮತ್ತು ಸಂದರ್ಭಕ್ಕೆ ತಕ್ಕಂತೆ ಸ್ನೇಹಿತರ ಮತ್ತು ಬಂಧುಗಳ ಪ್ರಾಮುಖ್ಯತೆ ನಮ್ಮ ಜೀವನದಲ್ಲಿ ಹೆಚ್ಚು ಕಮ್ಮಿಯಾಗುತ್ತದೆ. ಕಾಲೇಜಿನಲ್ಲಿ ದಿನಾ ಸಿಗುತ್ತಿದ್ದ ಆ ಆಪ್ತ ಗೆಳೆಯರು ಇಂದು ಒಂದೇ ಊರಿನಲ್ಲಿ ಇದ್ದರೂ ತಿಂಗಳುಗಟ್ಟಳೆ ಸಿಗುವುದಿಲ್ಲ. ನನ್ನನ್ನೂ ಸೇರಿ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ವ್ಯಸ್ತರಾಗಿದ್ದೇವೆ. :-(

ಅಮಿತ್ ವಾಪಸ್ ಬಂದ ಮೇಲೆ ಆತನ ಜೊತೆ ಕೆಲವು ಕ್ಷಣಗಳನ್ನು ಕಳೆಯಬೇಕು ಅಂತ ಮೋಹನನಿಗೆ ಅನಿಸಿತು.

ಅಷ್ಟರಲ್ಲಿ ಆಗಾಗ ಆಫ್ ಆಗುತ್ತಿದ್ದ ಮೋಹನನ ಮೊಬೈಲಿಗೆ ಒಂದು ಕರೆ ಬಂತು.
'ಸಾರ್.. ಮೋಹನ್ ಅವರಾ... ಇಲ್ಲಿ ನಿಮ್ಮ ಮಿತ್ರರೊಬ್ಬರು ಗಾಡಿ ಅಪಘಾತದಲ್ಲಿ ಮೃತರಾಗಿದ್ದಾರೆ. ಗಾಡಿ ಬ್ರೇಕ್ ಫೇಲ್ ಆದ ಕಾರಣ ಆಯ ತಪ್ಪಿ ಮರಕ್ಕೆ ಡಿಕ್ಕಿ ಹೂಡೆದು ಹೀಗಾಯಿತು. ಅವರ ಜೇಬಿನಲ್ಲಿದ್ದ ಮೊಬೈಲ್ನಲ್ಲಿದ್ನದ ನಿಮ್ಮ ನಂಬರ್ ಸಿಕ್ಕ ಮೇಲೆ ನಿಮಗೆ ತಿಳಿನಡೆಸುತ್ತಿದ್ದೇವೆ.'

ಮೋಹನ ಅಂತರ್ಮುಖಿಯಾದ.

Friday, January 25, 2008

ಕೃತಗ್ನ(ಘ್ಹ್ನ)ತೆ

"ರೀ... ಹಾಸಿಗೆ ಇದ್ದಷ್ತು ಕಾಲು ಚಾಚಬೇಕು ಕಣ್ರೀ...
ದೀಪುಗೆ ಯಾಕೆ ಸಾಲ ಮಾಡಿ ಕಂಪ್ಯೂಟರ್ ಇಂಜಿನೀಯರಿಂಗ್ ಪೇಮೆಂಟ್ ಸೀಟ್ ಕೊಡಿಸ್ತೀರಾ".... ಅಂತ ಹೇಳಿದಳು ನನ್ನಾಕೆ.

"ಲೇ... ನಮಗೆ ಇರೋದೆ ಒಬ್ಬನೆ ಮಗ. ಅವನಿಗೆ ಖರ್ಚು ಮಾಡದೆ ಇನ್ಯಾರಿಗೆ ಮಾಡಬೇಕು ಹೇಳು."... ಅಂದೆ ನಾನು.
"ನಿಮಗೆ ಒಬ್ಬಳು ಮಗಳು ಕೂಡ ಇದ್ದಾಳೆ, ಅವಳ ಮದುವೆಗೂ ದುಡ್ಡು ಹೊಂಚಬೇಕು ಅನ್ನೋದನ್ನ ಮರೀಬೇಡಿ"... ಅಂದಳು ಗೀತಾ.

"ದೇವರಿದ್ದಾನೆ ಸುಮ್ಮನಿರೆ... ಅವನು ಎಲ್ಲಾರನ್ನು ಕಾಯುತ್ತಾನೆ." .... ಅಂದೆ. ಹೆಂಡತಿ ಆ ಕಡೆ ಮಗ್ಗಲು ಮಾಡಿಕೊಂಡು ಮಲಗಿ ಬಿಟ್ಟಳು.
ನಾನು ಹಾಗೆ ಕಣ್ಣು ಮುಚ್ಚಿ ನಿದ್ದೆ ಮಾಡಲು ಯತ್ನಿಸಿದೆ... ಆದರೆ.. ನನ್ನ ಮನಸ್ಸು ಒಮ್ಮಿಂದೊಮ್ಮೆಲೇ ಮೂವತ್ತಾರು ವರ್ಷ ಹಿಂದಕ್ಕೆ ಉರುಳಿತು.
ನನ್ನ ಹದಿ ಹರೆಯದ ದಿನಗಳು ಕಣ್ಣ ಮುಂದೆ ಗೋಚರಿಸತೊಡಗಿದವು.

ಆ ದಿನಗಳು... ಕಾಲೇಜಿನ ಫ್ಹೈನಲ್ ಇಯರ್ ಅದು. ನಾನು ರಾಜು, ಶಂಕರ, ಕಿಟ್ಟಿ ಒಟ್ಟಿಗೆ ಇದ್ದು ಬಿಟ್ಟ್ರೆ ಆಯ್ತು. ನಮನ್ನ ಹಿಡಿಯೋರೆ ಇಲ್ಲ. ದಿನಾ ಬೆಳಿಗ್ಗೆ ಕಾಲೇಜು ನೆಪ ಮಾಡಿ ಮನೆಯಿಂದ ಹೊರಟು ರಾಜೇಶ್ ಖನ್ನಾ, ರಾಜ್ ಕುಮಾರ್, ಉದಯ್ ಕುಮಾರ್ ಸಿನೆಮಾ ನೋಡೋದು. ಕಾಲೇಜಿಗೆ ಬಂಕ್ ಹೊಡೆಯೋದರಲ್ಲಿ ಎತ್ತಿದ ಕೈ !
ದಿಲ್ ದಾರ್ ಆಗಿ ಯಾವುದಕ್ಕೂ ಕೇರ್ ಮಾಡದೆ "Live Life King Size" ಅನ್ನೋ attitude !

ಪರೀಕ್ಷೆ ಹತ್ರ ಬರುತಿದ್ದ ಹಾಗೆ ಪಾಸ್ ಆಗಲಿಕ್ಕೆ ಎಷ್ತು ಬೇಕೊ ಅಷ್ಟು ಓದೋದು ಅಷ್ಟೆ. ಸ್ನೇಹಿತರ ಜೊತೆ ಊರು ಸುತ್ತೋದು ಅಂದ್ರೆ ಎಲ್ಲಿಲ್ಲದ ಪ್ರೀತಿ. ಅಪ್ಪ ಅಮ್ಮ ನನ್ನನ್ನು ಸಾಕಲಿಕ್ಕೆ ಎಷ್ಟು ಕಷ್ಟ ಪಡುತ್ತಿದ್ದಾರೆ ಅಂತ ಗೊತ್ತಿದ್ರೂ ಜಾಸ್ತಿ ತಲೆ ಕೆಡಿಸಿಕೊಳ್ತಾ ಇರಲಿಲ್ಲ.
ದಿನಗಳು ಉರುಳಿದವು...
ಡಿಗ್ರಿ ರಿಸಲ್ಟ್ ಬಂದೇ ಬಿಡ್ತು... ಇಷ್ಟು ದಿನ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಹಾಗೆ ಅಪ್ಪನ ಹಣದ ಮೇಲೆ ಜೀವನ ಮಾಡ್ತಾ ಇದ್ದೆ. ನಿಜವಾದ ಬದುಕು ಏನು ಅಂಥ ಆಗ ಅರ್ಥ ಆಯಿತು. ಈಗ ದುಡ್ಡು ಕೇಳೋಕೆ ಏನೋ ಒಂಥರಾ ಸಂಕೋಚ.
ತಿಂಗಳುಗಳು ಉರುಳಿದರೂ ಕೆಲಸ ಸಿಗಲಿಲ್ಲ.

ಒಂದು ದಿನ ಕೆಲಸದ ಇಂಟರ್ವ್ಯೂ ನಲಿ ಅದೃಷ್ಟ ಖುಲಾಯಿಸಿಯೇ ಬಿಡ್ತು. ಬ್ಯಾಂಕ್ ಒಂದರಲ್ಲಿ ಕೆಲಸ ಗಟ್ಟಿಯಾಗುವ ಮಟ್ಟಕ್ಕೆ ವಿಷಯ ಬಂತು. ಆದರೆ ಒಂದೇ ಒಂದು ತೊಡಕು ಅಂದರೆ ಆ ಬ್ಯಾಂಕಿನ ಅಧಿಕಾರಿ ಇಪ್ಪತ್ತು ಸಾವಿರ ಲಂಚ ಕೇಳಿದ್ದರು. ನನ್ನ ಹತ್ತಿರ ಬಿಡಿಗಾಸು ಕೊಡ ಇಲ್ಲ.

ಅಪ್ಪನ ಹತ್ತಿರ ಇದರ ಬಗ್ಗೆ ಹೇಗೆ ಮಾತಾಡೋದು ಅಂತ ತೋಚುತ್ತಾ ಇರಲಿಲ್ಲ. ಕಡೆಗೂ ಧೈರ್ಯ ಮಾಡಿ ಕೇಳಿಯೇಬಿಟ್ಟೆ. "ಅಪ್ಪ.. ಸಂಬಳ ಬಂದ ಕೂಡಲೆ ಕಿಷ್ಟಿನಲ್ಲಿ ಹಿಂತಿರುಗಿಸುತ್ತೇನೆ..." ಅಪ್ಪ ತನ್ನ ಪಿಂಚಣಿ ಹಣದಿಂದ ತೆಗೆದು ಕೊಟ್ಟರು.

"ಲೇ.. ಅಪ್ಪ ಯಾಕೆ ಬಂದಿದ್ರು ಮನೆಗೆ? ಏನು ಬೇಕಿತ್ತಂತೆ?" .. ಅಂತ ಕೇಳಿದೆ ನಾನು. ಅವತ್ತೇ ಹೇಳಿದ್ನಲ್ಲ ಅವರಿಗೆ ಈಗ ನನ್ನ ಹತ್ರ ದುಡ್ಡು ಇಲ್ಲ ಅಂತ ! ಇಲ್ಲ ರೀ.. ನಿಮ್ಮ ತಂಗಿ ಮದುವೆಗೆ ಕರೆಯೊಕ್ಕೆ ಬಂದಿದ್ದರು.

Sunday, August 19, 2007

A word About MadhuLekha

This site is dedicated the spirit of penning & the power of the pen.

The site would soon have my compilation of short stories reflecting today's era & culture of the people. Some of the stories would reflect on the lighter side of LIFE & human emotions & psychology.
--MadhuLekha

NOTE: A request to the readers of this site... This compilation holds a special place in my heart.
If you have reached this site, you are one of the privileged person who is a very close acquaintance to me.
Please feel free to chip in with your comments. But please do not circulate/distribute this site to your other contacts.